ಕಿಚ್ಚನ ಮುಂದಿನ ಚಿತ್ರ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ

Published on:  2017-01-11
Posted by:  Raksha

ಕನ್ನಡ ಚಿತ್ರರಂಗದಲ್ಲಿ ಹೊಸಬರ ಚಿತ್ರಗಳು ಹೊಸ ಅಲೆಯನ್ನೇ ಮೂಡಿಸುತ್ತಿವೆ, ಅಂತಹ ಸಾಲಿನಲ್ಲಿ ರಿಷಬ್ ಶೆಟ್ಟಿ ಕೂಡ ಒಬ್ಬರು ನಿಲ್ಲುತ್ತಾರೆ. ಸ್ಯಾಂಡಲ್ವುಡ್ ನಲ್ಲಿ ಕಿರಿಕ್ ಪಾರ್ಟಿ ಒಂದು ಹೊಸ ಟ್ರೆಂಡ್ ಸೆಟ್ ಮಾಡುತ್ತಿರುವಂತಹ ಚಿತ್ರ. ರಕ್ಷಿತ್ ಶೆಟ್ಟಿ ನಾಯಕತ್ವದಲ್ಲಿ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ 2016 ರ ಕೊನೆಯದಾಗಿ ಬಿಡುಗಡೆಯಾದ ಚಿತ್ರ, 2017 ಹೊಸ ವರ್ಷದ ಪ್ರಾರಂಭದಲ್ಲಿ ಒಳ್ಳೆಯ ಓಪನ್ನಿಂಗ್ಸ್  ಪಡೆದುಕೊಂಡು ಈ ಹಿಂದಿನ ಎಲ್ಲ ರೆಕಾರ್ಡ್ಸ್ ಗಳನ್ನ ಮುರಿದುಹಾಕಿ ಎಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಈಗ ಬಂದಿರುವ ಹೊಸ ವಿಷಯ ಏನಪ್ಪಾ ಅಂದರೆ ಕಿಚ್ಚ ಸುದೀಪ್ ರ ಮುಂದಿನ ಚಿತ್ರ ರಿಷಬ್ ಶೆಟ್ಟಿ ಯವರ ನಿರ್ದೇಶನದಲ್ಲಿ. ಕಿರಿಕ್ ಪಾರ್ಟಿ ಚಿತ್ರದ ನಂತರ ರಿಷಬ್ ತಮ್ಮ ಮುಂದಿನ ಚಿತ್ರದ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಆದರೆ ಅದಕ್ಕೂ ಮುನ್ನ ರಕ್ಷಿತ್ ಶೆಟ್ಟಿ ಕೂಡ ಸುದೀಪ್ ಜೊತೆ Thugs Of Malgudi ಅನ್ನೋ ಚಿತ್ರವನ್ನು ಮಾಡಲಿದ್ದಾರೆ. ಅದಾದ ಬಳಿಕ ನನ್ನ ಚಿತ್ರ ಶುರು ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.


ಏನೇ ಆಗಲಿ ಹೆಬ್ಬುಲಿ ನಂತರ ಸುಮಾರು ಪ್ರಾಜೆಕ್ಟ್ ಗಳು ಕಿಚ್ಚ ಸುದೀಪ್ ಕೈಯಲ್ಲಿವೆ. ಅದರಲ್ಲಿ ರಿಷಬ್ ಶೆಟ್ಟಿ ಚಿತ್ರವೂ ಒಂದು. ಹೀಗೆ ಹೊಸಬರು ಮತ್ತು ಸ್ಟಾರ್ ಗಳು ಒಟ್ಟಿಗೆ ಸೇರಿ ಚಿತ್ರ ಮಾಡುವುದರಿಂದ ಕನ್ನಡ ಚಿತ್ರರಂಗ ಇನ್ನು ಹೆಸರು ಮಾಡಿ, ಕನ್ನಡ ಚಿತ್ರರಂಗದತ್ತ ಎಲ್ಲರು ತಿರುಗಿ ನೋಡುವ ಕಾಲ ದೂರವಿಲ್ಲ.

loading...